<ಗದುಗಿನ ಭಾರತ ಪದಕೋಶ 
ರ,
 1.		ಯೋಷಿಜ್ಜನ, ಸ್ತ್ರೀಯರು ?, ಸಭಾ ಪರ್ವ,7,20
 2.		ರಂಚೆ, ಆನೆಯ ಮೇಲೆ ಹಾಕುವ ಹಾಸಿಗೆ, ಗದಾ ಪರ್ವ,9,38
 3.		ರಂಜಕರು, ಮನವೊಲಿಸುವಂತೆ ಮಾತನಾಡುವವರು, ಆದಿ ಪರ್ವ,8,52
 4.		ರಂಜಣಿಗೆ, ಪನ್ನೀರು, ಆದಿ ಪರ್ವ,12,16
 5.		ರಂಜಿಸಿತು, ರಂಜನೆಯನ್ನು ಕೊಟ್ಟಿತು.  ಉರೆ, ಭೀಷ್ಮ ಪರ್ವ,5,0
 6.		ರಂಜಿಸು, ಪ್ರಕಾಶಿಸು, ಆದಿ ಪರ್ವ,15,8
 7.		ರಂಜಿಸು, ಮೆರೆ, ಆದಿ ಪರ್ವ,16,38
 8.		ರಕ್ಕಸ, ರಾಕ್ಷಸ(ಸಂ), ಗದಾ ಪರ್ವ,3,10
 9.		ರಚನೆ, ಮಾಡುವಿಕೆ, ಆದಿ ಪರ್ವ,12,0
 10.		ರಚಿತ, ಸಿದ್ಧಮಾಡುವುದು, ಆದಿ ಪರ್ವ,7,11
 11.		ರಚಿಸಿದನು, ಉಂಟು ಮಾಡಿದನು., ಭೀಷ್ಮ ಪರ್ವ,3,2
 12.		ರಚಿಸು, ನಿರ್ಮಿಸು, ಆದಿ ಪರ್ವ,12,0
 13.		ರಚಿಸು, ಸಿದ್ಧಮಾಡು, ಆದಿ ಪರ್ವ,12,26
 14.		ರಚಿಸು, ಏರ್ಪಡಿಸು., ಉದ್ಯೋಗ ಪರ್ವ,6,10
 15.		ರಜ, ಧೂಲು, ಆದಿ ಪರ್ವ,8,39
 16.		ರಜತಾಚಲ, ಕೈಲಾಸ, ಆದಿ ಪರ್ವ,16,55
 17.		ರಜನಿ, ರಾತ್ರಿ., ಗದಾ ಪರ್ವ,9,0
 18.		ರಣಕೇಳಿ, ಯುದ್ಧ ಕ್ರೀಡೆ, ವಿರಾಟ ಪರ್ವ,8,44
 19.		ರಣಖೇಡರು, ಯುದ್ಧಕ್ಕೆ ಹೆದರುವವರು, ಕರ್ಣ ಪರ್ವ,8,30
 20.		ರಣಖೇಡಿ, ರಣಹೇಡಿ, ಕರ್ಣ ಪರ್ವ,14,40
 21.		ರಣಚಮತ್ಕøತಿ, ರಣಸಾಹಸ, ಭೀಷ್ಮ ಪರ್ವ,4,2
 22.		ರಣಜೇಯ, ಯುದ್ಧದಲ್ಲಿ ಗೆಲ್ಲಲ್ಪಡುವವನು, ಶಲ್ಯ ಪರ್ವ,3,30
 23.		ರಣದಜೇಯ, ಅಪ್ರತಿಮಶೂರ, ಭೀಷ್ಮ ಪರ್ವ,5,11
 24.		ರಣದವಕಿ, ಯುದ್ಧದ ಉತ್ಸಾಹದಲ್ಲಿರುವವನು, ಗದಾ ಪರ್ವ,7,6
 25.		ರಣದಾಯತನ, ಸಾಮಥ್ರ್ಯ, ದ್ರೋಣ ಪರ್ವ,15,43, ,
 26.		ರಣದೂಳಿಗ, ಯುದ್ಧದ ಕೆಲಸ, ಗದಾ ಪರ್ವ,3,32
 27.		ರಣಧೀರ, ರಣಶೂರ, ಭೀಷ್ಮ ಪರ್ವ,3,21
 28.		ರಣಬಾಹಿರ, ಯುದ್ಧವಿಮುಖರು, ಗದಾ ಪರ್ವ,4,39
 29.		ರಣಬಿನ್ನಾಣ, ಯುದ್ಧಕೌಶಲ, ಗದಾ ಪರ್ವ,7,48
 30.		ರಣಭಯಂಕರ, ಯುದ್ಧದಲ್ಲಿ ಭಯ ಹುಟ್ಟಿಸುವವನು, ಆದಿ ಪರ್ವ,4,63
 31.		ರಣಮಹಿ, ರಣಭೂಮಿ , ಗದಾ ಪರ್ವ,11,22
 32.		ರಣಮಹೀಸಂತಮಸ ಶಾಂತೇಕ್ಷಣರು, ರಣಭೂಮಿಯ ಕತ್ತಲಿನಲ್ಲೊಂದು ಕ್ಷಣ ಸ್ತಬ್ಧರಾದ ಯೋಧರು, ದ್ರೋಣ ಪರ್ವ,15,30
 33.		ರಣಮೈಲಾರರಾದರು, ಮೈಲಾರ ಒಂದು ಕ್ಷುದ್ರ ದೇವತೆ ಶಿವನು ಗೊರವನ ವೇಷ ತಾಳಿ ಬಂದನೆಂದು ಪ್ರತೀತಿಯಿದೆ. ಇಲ್ಲಿ ಕರ್ಣ ಭೀಷ್ಮ ಮೊದಲಾದವರು ಯುದ್ಧದಲ್ಲಿ ಸೋತರು ಅನಂತರ ಹೆದರಿ ಓಡಿದರು ಎಂದರ್ಥ, ವಿರಾಟ ಪರ್ವ,8,70
 34.		ರಣರಸ, ಯುದ್ಧದ ಸ್ವಾರಸ್ಯಗಳು, ಗದಾ ಪರ್ವ,3,5
 35.		ರಣವಾಜಿ, ಯುದ್ಧದ ಕುದುರೆ, ವಿರಾಟ ಪರ್ವ,5,10
 36.		ರಣವಾದ ಸಿದ್ಧಿ, ಯುದ್ಧದಲ್ಲಿ ಗೆಲುವಾಗುವ ಬಗೆ, ಭೀಷ್ಮ ಪರ್ವ,2,34
 37.		ರಣವಿಜಯನಿಧಿ, ಯುದ್ಧದಲ್ಲಿ ಜಯವೆಂಬ ಐಶ್ವರ್ಯ., ಗದಾ ಪರ್ವ,6,3
 38.		ರಣವಿಧಾನ, ಯುದ್ಧದ ರೀತಿ, ಗದಾ ಪರ್ವ,11,73
 39.		ರಣಹೇಡಿ, ಅಂಜುಬುರುಕ, ಭೀಷ್ಮ ಪರ್ವ,7,8
 40.		ರಣಾಧ್ಯಕ್ಷದಲಿ, ಯುದ್ಧದ ನಾಯಕತ್ವದಲ್ಲಿ, ಗದಾ ಪರ್ವ,8,61
 41.		ರಣಿತ, ಶಬ್ಧ, ಗದಾ ಪರ್ವ,1,7
 42.		ರತುನರಾಜಿ, ರತ್ನ ಸಮೂಹ, ಭೀಷ್ಮ ಪರ್ವ,3,23
 43.		ರತ್ನಾಕರಪರೀತ, ಸಮುದ್ರದಿಂದ ಆವರಿಸಲ್ಪಟ್ಟ ಭೂಮಿ (ರತ್ನಕ್ಕೆ ಆಕರವಾದುದು ರತ್ನಾಕರ, ಗದಾ ಪರ್ವ,13,8
 44.		ರತ್ನಾವಳಿ, ಮುತ್ತಿನಹಾರ, ಆದಿ ಪರ್ವ,13,63
 45.		ರಥ ಪದಾತಿ, ಕಾಲಾ, ಸಭಾ ಪರ್ವ,3,30
 46.		ರಥಚಯ, ರಥಸಮೂಹ, ಭೀಷ್ಮ ಪರ್ವ,8,14
 47.		ರಥಪದ ಧೂಳಿ, ರಥ ಚಕ್ರಗಳಿಂದ ಎದ್ದ ಧೂಳು, ಭೀಷ್ಮ ಪರ್ವ,4,97
 48.		ರಥವಾಹ, ರಥದ ಕುದುರೆ, ಕರ್ಣ ಪರ್ವ,4,23
 49.		ರಥವಾಹತತಿ, ಕುದುರೆಗಳಸಮೂಹ, ಗದಾ ಪರ್ವ,1,35
 50.		ರಥಾಂಗ, ಚಕ್ರವಾಕ, ಕರ್ಣ ಪರ್ವ,2,1
 51.		ರಥಿ, ರಥದÀಲ್ಲಿ ಕುಳಿತು ಯುದ್ಧ ಮಾಡುವವರು, ದ್ರೋಣ ಪರ್ವ,14,26
 52.		ರಥಿಕ, ರಥಕಾರ, ಭೀಷ್ಮ ಪರ್ವ,3,19
 53.		ರಥಿಕತ್ರಯ, ಮೂರು ಜನ ರಥಿಕರು, ಗದಾ ಪರ್ವ,8,63
 54.		ರದನ, ದಂತ, ಆದಿ ಪರ್ವ,13,18
 55.		ರದನಿ, ರದನ(ದಾಡೆ) ಉಳ್ಳದ್ದು, ಗದಾ ಪರ್ವ,1,61
 56.		ರನ್ನ, ರತ್ನ, ಉದ್ಯೋಗ ಪರ್ವ,8,3
 57.		ರಪಣ, ಪಣ, ಸಭಾ ಪರ್ವ,13,60
 58.		ರಪಣ, ಆಸ್ತಿ, ಗದಾ ಪರ್ವ,11,34
 59.		ರಭಸ, ಭರ, ಆದಿ ಪರ್ವ,10,22
 60.		ರಮಿಸು, ಸುಖಿಸು, ಆದಿ ಪರ್ವ,2,38
 61.		ರವಕುಳ, ಆಕ್ರಂದನ, ಕರ್ಣ ಪರ್ವ,1,6
 62.		ರವಣ, ಪರಿಹಾಸ, ಸಭಾ ಪರ್ವ,2,68
 63.		ರವಣ, ರಪಣ, ಕರ್ಣ ಪರ್ವ,24,46
 64.		ರವಣಿಸಲು, ಮುನ್ನುಗ್ಗಲು, ಭೀಷ್ಮ ಪರ್ವ,5,2
 65.		ರವದ, ಧ್ವನಿಯಿಂದ, ದ್ರೋಣ ಪರ್ವ,1,14
 66.		ರವಿಕಿರಣಾಳಿ, ಸೂರ್ಯನ ಕಿರಣಗಳ ಸಮೂಹ, ಗದಾ ಪರ್ವ,11,20
 67.		ರವಿತೇಜ, ಸೂರ್ಯನ ತೇಜಸ್ಸು, ಗದಾ ಪರ್ವ,13,19
 68.		ರವಿಯ ಮಗ, ಕರ್ಣ, ವಿರಾಟ ಪರ್ವ,8,11
 69.		ರವಿಸೂನು, ಕರ್ಣ, ದ್ರೋಣ ಪರ್ವ,3,79
 70.		ರಸ, ಪಾದರಸ, ಆದಿ ಪರ್ವ,15,8
 71.		ರಸ, ಗಂಧ, ಆದಿ ಪರ್ವ,13,64
 72.		ರಸಭಾಜನ, ಮದ್ಯಪಾತ್ರೆ, ವಿರಾಟ ಪರ್ವ,2,49
 73.		ರಸಾತಳ, ಭೂಮಿಯ ಕೆಳಗಿರುವ ಏಳು ಲೋಕಗಳಲ್ಲಿ ನಾಲ್ಕನೆಯದು (ಅತಲ, ಭೀಷ್ಮ ಪರ್ವ,2,22, , ,  ರಸಾತಲ ,  ತಲಾತಲ ,  ಮಹಾತಲ ,  ಪಾತಾಲ), 
 74.		ರಸುಮೆ, ರಶ್ಮಿ , ದ್ರೋಣ ಪರ್ವ,10,3
 75.		ರಸುಮೆ, ಕಿರಣ, ಭೀಷ್ಮ ಪರ್ವ,2,8
 76.		ರಹ, ಅಚ್ಚರಿಪಡು, ವಿರಾಟ ಪರ್ವ,8,22
 77.		ರಹಣಿ, ಸಂಬಂಧ, ಸಭಾ ಪರ್ವ,15,21
 78.		ರಹಿ, ಸಡಗರ, ಗದಾ ಪರ್ವ,9,4
 79.		ರಹಿ, ಪ್ರಕಾರ, ಸಭಾ ಪರ್ವ,2,78
 80.		ರಹಿ, ಮಾರ್ಗ, ದ್ರೋಣ ಪರ್ವ,19,55, 
 81.		ರಹಿ, ಉತ್ಸಾಹ, ಸಭಾ ಪರ್ವ,14,47
 82.		ರಹಿ, ತೀವ್ರತೆ, ಸಭಾ ಪರ್ವ,2,120
 83.		ರಾಗ, ಪ್ರೀತಿ/ಕೋಪ, ಉದ್ಯೋಗ ಪರ್ವ,4,38
 84.		ರಾಗ, ಬಣ್ಣ, ಆದಿ ಪರ್ವ,13,16
 85.		ರಾಗ, ಮೃಗವನ್ನು ಆಕರ್ಷಿಸುವ ಹಾಡು, ಆದಿ ಪರ್ವ,8,76
 86.		ರಾಗ, ಕೆಂಪುತನ , ವಿರಾಟ ಪರ್ವ,5,35
 87.		ರಾಗಸಮುದಯ, ಪ್ರೀತಿಪಾತ್ರನು, ಉದ್ಯೋಗ ಪರ್ವ,8,25
 88.		ರಾಗಹರ, ರಾಗ, ಗದಾ ಪರ್ವ,6,10
 89.		ರಾಘೆ, ಅಂಕವಣಿ (ಕುದುರೆ ಹತ್ತಲು ಮಗ್ಗುಲಲ್ಲಿ ನೇತು ಬಿಟ್ಟಿರುವ ಬಳೆ), ಭೀಷ್ಮ ಪರ್ವ,4,53
 90.		ರಾಜ, (ಇಲ್ಲಿ ಧೃತರಾಷ್ಟ್ರ), ಗದಾ ಪರ್ವ,11,51
 91.		ರಾಜಋಷಿ, ರಾಜನಾಗಿದ್ದೂ, ದ್ರೋಣ ಪರ್ವ,14,23
 92.		ರಾಜಕ, ದೊರೆ., ಉದ್ಯೋಗ ಪರ್ವ,6,13
 93.		ರಾಜಬ್ರುವ, ಅರಸನೆಂದು ಹೇಳಿಕೊಳ್ಳುವವನು, ಆದಿ ಪರ್ವ,4,20
 94.		ರಾಜಮಂತ್ರ, ರಾಜನೀತಿ., ಭೀಷ್ಮ ಪರ್ವ,7,18
 95.		ರಾಜರವಿ, ರಾಜರಲ್ಲಿ ಸೂರ್ಯನಂತಿರುವವನು (ಇಲ್ಲಿ ದುರ್ಯೋ, ಗದಾ ಪರ್ವ,8,2
 96.		ರಾಜಸ ತಾಮಸ, ತ್ರಿಗುಣಗಳಾದ ಸತ್ವ , ಗದಾ ಪರ್ವ,11,38
 97.		ರಾಜಸವಿಕಾರ, ರಾಜಸಗುಣದ ವಿಕಾರಗಳು (ಗುಣಗಳು 3 ಬಗೆ. ಸತ್ವ, ಗದಾ ಪರ್ವ,11,13
 98.		ರಾಜಾನ್ವಯ, ರಾಜವಂಶ, ವಿರಾಟ ಪರ್ವ,1,19
 99.		ರಾಜಾವಳಿ, ರಾಜರ ಸಮೂಹ, ಆದಿ ಪರ್ವ,18,19
 100.		ರಾಜೀವ ಮುಖಿ, ತಾವರೆಯ ಮುಖದವಳು, ವಿರಾಟ ಪರ್ವ,2,27
 101.		ರಾಜ್ಯಪಾಲನ, ರಾಜ್ಯವನ್ನು ಪಾಲಿಸುವ ಕ್ರಮ, ಗದಾ ಪರ್ವ,13,12
 102.		ರಾಜ್ಯವಿಭ್ರಂಶ, ರಾಜ್ಯನಾಶ, ಗದಾ ಪರ್ವ,11,44
 103.		ರಾಜ್ಯಶ್ರೀ, ರಾಜಲಕ್ಷ್ಮಿ, ಉದ್ಯೋಗ ಪರ್ವ,3,129
 104.		ರಾಣಿಕ, ಹೊಂದಾಣಿಕೆ, ಅರಣ್ಯ ಪರ್ವ,21,12
 105.		ರಾಣಿಕ, ಹೊಂದಾಣಿಕೆ, ಸಭಾ ಪರ್ವ,2,51
 106.		ರಾಣೀವಾಸ, ರಾಜನಪತ್ನಿ, ಗದಾ ಪರ್ವ,10,22
 107.		ರಾಣೀವಾಸ, ರಾಜರ ಪತ್ನಿಯರು, ಗದಾ ಪರ್ವ,11,2
 108.		ರಾಧಾತನಯ, ಕರ್ಣನು ರಾಧೆ ಅಧಿರಥ ಎಂಬ ಬೆಸ್ತ ದಂಪತಿಗಳ ಸಾಕು ಮಗ, ವಿರಾಟ ಪರ್ವ,7,8
 109.		ರಾಧಾತನುಜ, ರಾಧೆಯಮಗ, ಗದಾ ಪರ್ವ,10,9
 110.		ರಾಧಾನಂದನ, ಕರ್ಣ, ಆದಿ ಪರ್ವ,20,65
 111.		ರಾಧೆಯಾತ್ಮಜ, ರಾಧೆಯ ಮಗ , ಗದಾ ಪರ್ವ,12,11
 112.		ರಾಮ ಕಟಕ, ರಾಮಸೇನೆ, ಭೀಷ್ಮ ಪರ್ವ,1,37
 113.		ರಾಮಣೀಯಕ, ಸುಂದರವಾದ, ಗದಾ ಪರ್ವ,6,10
 114.		ರಾಮಭೃತ್ಯ, ಆಂಜನೇಯ, ಸಭಾ ಪರ್ವ,2,29
 115.		ರಾಯ, ಕೌರವ, ವಿರಾಟ ಪರ್ವ,5,9
 116.		ರಾಯಕಟಕ, ಇಲ್ಲಿ ದುರ್ಯೋಧನನ ಸೇನಾ ಪಾಳೆಯ, ಭೀಷ್ಮ ಪರ್ವ,7,0
 117.		ರಾಯಕಟಕ, ರಾಜನ ಸೈನ್ಯ, ಗದಾ ಪರ್ವ,11,23
 118.		ರಾಯಗರುಡಿಯ, ರಾಜನಗರುಡಿಯ (ರಾಜಕಾರ್ಯದ?) ಜಸ, ಗದಾ ಪರ್ವ,9,4
 119.		ರಾಯಗಿಡಿಗ, ರಾಯಭೇರಿ, ಭೀಷ್ಮ ಪರ್ವ,2,3
 120.		ರಾಯಗಿಡಿಗ, ಒಂದು ಬಗೆಯ ದೊಡ್ಡ ವಾದ್ಯ ಚಂಬಕ, ಕರ್ಣ ಪರ್ವ,14,33
 121.		ರಾಯಗಿಡಿಮಿಡಿ, ಇದು ರಾಯಗಿಡಿಗ ಇರಬಹುದು , ವಿರಾಟ ಪರ್ವ,8,3
 122.		ರಾಯಚೂಣಿ, ಕೌರವ ಸೇನೆ, ವಿರಾಟ ಪರ್ವ,5,2
 123.		ರಾಯತನ, ದೊರೆತನ, ಆದಿ ಪರ್ವ,9,6
 124.		ರಾಯದನುಜಘರಟ್ಟ, ರಾಜರೆಂಬ ರಾಕ್ಷಸರನ್ನು ಪುಡಿ ಮಾಡುವಂತಹವನು., ಭೀಷ್ಮ ಪರ್ವ,6,0
 125.		ರಾಯದಳ, ರಾಜಸೇನೆ, ವಿರಾಟ ಪರ್ವ,8,49
 126.		ರಾಯನ, ಧರ್ಮರಾಯನ, ದ್ರೋಣ ಪರ್ವ,2,33
 127.		ರಾಯನ ಅನುಜರು, ಕೌರವನ ತಮ್ಮಂದಿರು, ಭೀಷ್ಮ ಪರ್ವ,7,18
 128.		ರಾಯನಯ್ಯ, ದುರ್ಯೋಧನನ ತಂದೆ, ಗದಾ ಪರ್ವ,11,0
 129.		ರಾಯರ, ನಾನಾ ದ್ವೀಪಗಳ ಒಡೆಯರಾಗಿದ್ದ ರಾಜರುಗಳ, ಸಭಾ ಪರ್ವ,2,123
 130.		ರಾಯವನದಾವಾನಳ, ರಾಜರವಂಶವೆಂಬ ವನಕ್ಕೆ ಪ್ರಳಯಾಗ್ನಿಯಂತಿರುವವನು, ಗದಾ ಪರ್ವ,7,0
 131.		ರಾಯಸ, ಸಂದೇಶ, ಉದ್ಯೋಗ ಪರ್ವ,11,14
 132.		ರಾಯಸ, ರಾಜಪತ್ರ ರಾಜಸಂದೇಶದ ಪತ್ರ (ತೆಲುಗಿನಲ್ಲಿ ರಾಯಸ ವ್ರಾಯಸಮು=ರಾಜಲೇಖ), ವಿರಾಟ ಪರ್ವ,10,43
 133.		ರಾವಣಾಂತಕ, ಶ್ರೀರಾಮ, ಭೀಷ್ಮ ಪರ್ವ,3,81
 134.		ರಾವು, ಭಲೇ, ದ್ರೋಣ ಪರ್ವ,9,37
 135.		ರಾವುಠಿ, ಭರ್ಜಿ, ಶಲ್ಯ ಪರ್ವ,2,54
 136.		ರಾವುತ, ಕುದುರೆಸವಾರ, ಉದ್ಯೋಗ ಪರ್ವ,3,104
 137.		ರಾವುತು, ಭಲೇ, ಗದಾ ಪರ್ವ,1,31
 138.		ರಾವುತೋ, ಕೊಂಡಾಟದ ನುಡಿ, ಭೀಷ್ಮ ಪರ್ವ,4,71
 139.		ರಾವ್ತರು, ರಾವುತರು, ಶಲ್ಯ ಪರ್ವ,2,27
 140.		ರಾವ್ತರು, ಕುದುರೆಸವಾರರು, ಗದಾ ಪರ್ವ,1,16
 141.		ರಿಂಗಣ, ನರ್ತನ, ಆದಿ ಪರ್ವ,12,15
 142.		ರಿಂಗಣ ಕುಣಿದು, ನೃತ್ಯ ಮಾಡಿ, ದ್ರೋಣ ಪರ್ವ,6,31
 143.		ರಿಂಗಣಗುಣಿ, ಜಾರಿಜಾರಿ ಸುತ್ತು ಹೊಡೆದು ಕುಣಿ, ಕರ್ಣ ಪರ್ವ,19,73
 144.		ರಿಪು, ಶತ್ರು (ಪಾಂಡವರು), ವಿರಾಟ ಪರ್ವ,4,20
 145.		ರಿಪು ಪುರವನು, ಶತ್ರುವಾದ ಜರಾಸಂಧನ ಪಟ್ಟಣವನ್ನು, ಸಭಾ ಪರ್ವ,3,3
 146.		ರಿಪು ಬಲವಿಲಯ, ಶತ್ರುಬಲ ನಾಶ ಮಾಡುವವನು, ಭೀಷ್ಮ ಪರ್ವ,3,25
 147.		ರಿಪುಕುಲದವಾನಳ, ಶತ್ರುವಂಶದ ಪಾಲಿಗೆ ಕಾಡುಕಿಚ್ಚು (ಭೀಮ) ಆನು, ವಿರಾಟ ಪರ್ವ,4,54
 148.		ರಿಪುಜನಪ, ಶತ್ರುರಾಜ, ಗದಾ ಪರ್ವ,11,48
 149.		ರಿಪುಜಾಲ, ಶತ್ರುಗಳ ಗುಂಪು, ಗದಾ ಪರ್ವ,10,1
 150.		ರಿಪುನಿವಹ, ಶತ್ರುಸಮೂಹ, ಶಲ್ಯ ಪರ್ವ,2,21
 151.		ರಿಪುಬಲ ದಿಶಾಪಟ, ಶತ್ರು ಸೇನೆಯ ಧೂಳೀಪಟ ಮಾಡುವವನು, ಭೀಷ್ಮ ಪರ್ವ,5,24
 152.		ರಿಪುಬಲಜಲಧಿ, ಶತ್ರುಸೇನೆಯೆಂಬ ಸಾಗರ, ಭೀಷ್ಮ ಪರ್ವ,5,10
 153.		ರಿಪುಭಂಜನ, ಶತ್ರುಸಂಹಾರ, ಗದಾ ಪರ್ವ,6,0
 154.		ರಿಪುರಾಯ, ಶತ್ರುರಾಜ, ವಿರಾಟ ಪರ್ವ,9,8
 155.		ರಿಪುರಾಯ ಮನ್ಮಥಭೀಮ, ರಿಪುರಾಯನೆಂಬ ಮನ್ಮಥನಿಗೆ ಈಶ್ವರನಂತಿರುವವನು. (ಮನ್ಮಥನನ್ನು ಹಣೆಗಣ್ಣಿನಿಂದ ಸುಟ್ಟ) ಶಿವ, ಸಭಾ ಪರ್ವ,13,9
 156.		ರಿಪುವ್ರಜ, ಶತ್ರುಸಮೂಹ, ಗದಾ ಪರ್ವ,9,24
 157.		ರುಚಿ, ಪ್ರಕಾಶ , ಗದಾ ಪರ್ವ,2,17, ,
 158.		ರುಚಿರ, ಮನೋಹರವಾದ, ಆದಿ ಪರ್ವ,12,26
 159.		ರುಜಾಂಗ, ರೋಗಿ, ಉದ್ಯೋಗ ಪರ್ವ,3,107
 160.		ರುಣ, ಸಾಲ, ಆದಿ ಪರ್ವ,8,39
 161.		ರುದ್ರನ ಅಗ್ಗದ ಕಣ್ಣ ಶಿಖಿ, ಪ್ರಳಯಕಾಲದ ರುದ್ರನ ಭಯಂಕರ ಕಣ್ಣಿನ ಬೆಂಕಿ, ಭೀಷ್ಮ ಪರ್ವ,9,7
 162.		ರುಧಿರ, ರಕ್ತ., ವಿರಾಟ ಪರ್ವ,9,19
 163.		ರುಧಿರಬಂಧುಗಳ, ರಕ್ತಧಾರೆಗಳ, ಭೀಷ್ಮ ಪರ್ವ,6,32
 164.		ರೂಢಿ, ಪ್ರಸಿದ್ಧಿ., ಉದ್ಯೋಗ ಪರ್ವ,6,20
 165.		ರೂಢಿಯಲ್ಲಿ ಚಪ್ಪೆಗೊಡಲಿ ಎಂಬರ್ಥದಲ್ಲಿದೆ ಆದರೆ ಇಲ್ಲಿ ಕತ್ತಿ ಎಂಬರ್ಥ ಬಳಸಿದೆ.  ಕಡುಗಿ, ಉತ್ಸಾಹದಲ್ಲಿ, ಭೀಷ್ಮ ಪರ್ವ,4,34
 166.		ರೂಢಿಸಿದ, ಹೆಸರಾಂತ, ಉದ್ಯೋಗ ಪರ್ವ,11,36
 167.		ರೂಪ ಸೆರೆವಿಡಿದ, ಸಾಕಾರ ರೂಪದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದ, ಭೀಷ್ಮ ಪರ್ವ,3,66
 168.		ರೂಪು, ಆಕೃತಿ., ಉದ್ಯೋಗ ಪರ್ವ,9,5
 169.		ರೂವಾರಿಗೆ, ಅಲಂಕೃತ ಪಲ್ಲಕ್ಕಿ, ವಿರಾಟ ಪರ್ವ,10,68
 170.		ರೂಹು, ರೂಪ, ವಿರಾಟ ಪರ್ವ,2,47
 171.		ರೆಂಚೆ, ಪಕ್ಕ ರಕ್ಷೆ, ಗದಾ ಪರ್ವ,3,13
 172.		ರೆಂಚೆ, ಪಕ್ಕರೆಕ್ಕೆ (ಮೈಕವಚ), ಭೀಷ್ಮ ಪರ್ವ,3,18
 173.		ರೆಂಚೆ, ಆನೆಯ ಪಕ್ಕೆಗಳಿಗೆ ಹಾಕುವ ಬಟ್ಟೆಯ ಹೊದಿಕೆ, ದ್ರೋಣ ಪರ್ವ,3,52
 174.		ರೇಣು, ಪರಾಗ, ಆದಿ ಪರ್ವ,12,15
 175.		ರೇಣು ಜನನ, ಧೂಳಿನ ಉತ್ಪತ್ತಿ, ಗದಾ ಪರ್ವ,6,30
 176.		ರೋದನಸರದ, ಅಳುವ ಸ್ವರದ, ಗದಾ ಪರ್ವ,11,28
 177.		ರೋಧಿನಿ, ಅಳುವವಳು, ಉದ್ಯೋಗ ಪರ್ವ,3,107
 178.		ರೋಮ, ಕೂದಲು, ಭೀಷ್ಮ ಪರ್ವ,6,40
 179.		ರೋಮಾಂಚ, ಪುಳಕದಿಂದ ಮೈ ಕೂದಲುಗಳು ನಿಮಿರುವುದು, ಗದಾ ಪರ್ವ,5,31
 180.		ರೋಮಾಳಿ, ಕೂದಲುಗಳ ಸಮೂಹ, ವಿರಾಟ ಪರ್ವ,3,105
 181.		ರೋಮಾಳಿ, ಕೂದಲಗುಂಪು, ಉದ್ಯೋಗ ಪರ್ವ,3,111
 182.		ರೋಷ ಪ್ರಕಟ ಪಾವಕ ವಿಸ್ಫುಲಿಂಗರು, ರೋಷವನ್ನು ಹೊರಸೂಸುವ ಬೆಂಕಿಯ ಕಿಡಿಯಂತೆ  ಹೊಳೆಯುತ್ತಿದ್ದವರು, ವಿರಾಟ ಪರ್ವ,8,19
 183.		ರೋಷಕ, ಸಿಟ್ಟಿನವನು, ಉದ್ಯೋಗ ಪರ್ವ,3,91
 184.		ರೋಷವಹ್ನಿ, ರೋಷವೆಂಬ ಅಗ್ನಿ, ಗದಾ ಪರ್ವ,7,48
 185.		ರೋಷಶಿಖಿಸ್ಫುಲಿಂಗ, ಕೋಪಾಗ್ನಿಯು ಕಿಡಿÀ, ಶಲ್ಯ ಪರ್ವ,3,59
 186.		ರೋಷಶ್ವಾಸ, ಕೋಪದಿಂದ ಹೊರಬರುವ ಬಿಸಿಯುಸಿರು, ಗದಾ ಪರ್ವ,7,1
 187.		ರೋಷಾಗ್ನಿ, ರೋಷದ ಬೆಂಕಿ, ಗದಾ ಪರ್ವ,11,68
 188.		ರೋಷೋತ್ಕರ, ಹೆಚ್ಚಿದ ರೋಷ, ಗದಾ ಪರ್ವ,5,37
 189.		ರೌಕುಳ, ಅಬ್ಬರ, ಗದಾ ಪರ್ವ,9,33
 190.		ರೌದ್ರ, ಭೀಕರ, ಆದಿ ಪರ್ವ,9,12
 191.		ರೌದ್ರ, ರೋಷ, ಆದಿ ಪರ್ವ,19,44
 192.		ರೌದ್ರರಂಜನೆ, ಘೋರಮನರಂಜನೆ., ಭೀಷ್ಮ ಪರ್ವ,4,22
 193.		ರೌರವ, ಭಯಂಕರವಾದ ನರಕ, ಆದಿ ಪರ್ವ,1,22
 194.		ರೌರವಸಿಂಧು, ಘೋರ ನರಕವೆಂಬ ಸಾಗರ, ಭೀಷ್ಮ ಪರ್ವ,3,37
 195.		ರೌಹಿಣೇಯ, ರೋಹಿಣಿಯ ಮಗ, ಗದಾ ಪರ್ವ,7,41
 196.		ಲಂಘಿಸಿತು, ಹಾರಿತು, ಭೀಷ್ಮ ಪರ್ವ,5,26
 197.		ಲಂಪಟ, ಆಸಕ್ತಿಯುಳ್ಳವನು, ವಿರಾಟ ಪರ್ವ,10,0
 ಕುಮಾರವ್ಯಾಸ ಕೋಶ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.ಸಿರಿಗನ್ನಡ ಅರ್ಥಕೋಶ

ನೋಡಿ
ಕುಮಾರವ್ಯಾಸ ಭಾರತ
ಗದುಗಿನ ಭಾರತ ಪದಕೋಶ
ಪರಿವಿಡಿ

ಉಲ್ಲೇಖ

ವರ್ಗ:ಕನ್ನಡ ಸಾಹಿತ್ಯ